ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ
ಆನಂದ ತೀರ್ಥಮತುಲಂ ಭಜೇ ತಾಪತ್ರಯಾಪಹಂ
ಅಸ್ಯಾವಿಷ್ಕರ್ತುಕಾಮಂ
ಕಲಿ-ಮಲ-ಕಲುಷೇS-
ಸ್ಮಿನ್-ಜನೇ ಜ್ಞಾನ-ಮಾರ್ಗಂ
ವಂದ್ಯಂ ಚಂದ್ರೇಂದ್ರ-ರುದ್ರ-
ದ್ಯುಮಣಿ-ಫಣಿ-ವಯೋ-
ನಾಯಕಾದ್ಯೈರಿಹಾದ್ಯ |
ಮಧ್ವಾಖ್ಯಂ ಮಂತ್ರ-ಸಿದ್ಧಂ
ಕಿಮುತ ಕೃತವತೋ
ಮಾರುತಸ್ಯಾವತಾರಂ
ಪಾತಾರಂ ಪಾರಮೇಷ್ಠ್ಯಂ
ಪದಮಪ-ವಿಪದಃ
ಪ್ರಾಪ್ತುರಾಪನ್ನ-ಪುಂಸಾಮ್
ಕಲಿಯುಗದ ದೋಷಗಳಿಂದ ದಿಕ್ಕುತಪ್ಪಿರುವ ಸಜ್ಜನರಿಗೆ ಸರಿಯಾದ ಜ್ಞಾನಮಾರ್ಗವನ್ನು ತೋರಿಸಲು ವಾಯುದೇವರು 'ಮಧ್ವ'ರಾಗಿ ಅವತರಿಸಿದರು. ರುದ್ರ, ಇಂದ್ರ, ಸೂರ್ಯ, ಗರುಡ, ಶೇಷಾದಿ ದೇವತೆಗಳಿಂದಲೂ ವಂದಿತರಾದ, ಭಕ್ತರ ಕಷ್ಟಗಳನ್ನು ಪರಿಹರಿಸುವ, ಹಾಗೂ ಭವಿಷ್ಯದಲ್ಲಿ ಬ್ರಹ್ಮ ಪದವಿಯನ್ನು ಏರಲಿರುವ ಆ ಮಧ್ವಾಚಾರ್ಯರ ಮಹಿಮೆಯನ್ನು ವರ್ಣಿಸಲು ಸಾಧ್ಯವೇ!